ಶಿವಪ್ಪ, ಡಿ ಎನ್

      1943ರಲ್ಲಿ ವೈದ್ಯ ಇಲಾಖೆಗೆ ಸೇರಿ ವೈದ್ಯರಾಗಿ, ಶಸ್ತ್ರವೈದ್ಯರಾಗಿ ಕೆಲಸ ನಿರ್ವಹಿಸಿದ್ದಾರೆ.  ಕರ್ನಾಟಕ ವೈದ್ಯ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.  'ವೈದ್ಯ ಪದಗಳ ಹುಟ್ಟು, ರಚನೆ ವೈದ್ಯರಿಗೆ ಮತ್ತು ವೈದ್ಯ ಸಾಹಿತಿಗಳಿಗೆ ಮತ್ತು ಸಮಸ್ತ ಕನ್ನಡಿಗರಿಗೂ ಡಾ|| ಡಿ.ಎನ್. ಶಿವಪ್ಪನವರ ಅಮೂಲ್ಯ ಕೊಡುಗೆ.  ಜನಾನುರಾಗಿ ವೈದ್ಯರಾಗಿದ್ದರು ಮತ್ತು ನಾಟಕಗಳಲ್ಲಿ ಅವರಿಗೆ ಹೆಚ್ಚು ಆಸಕ್ತಿಯಿತ್ತು.  ಆರೋಗ್ಯದ ಕುರಿತು ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ.  			
(ಡಾ. ವಸುಂಧರಾ ಭೂಪತಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ